ಶಾಲೆಯ ಇತಿಹಾಸ
ಸರ್ಕಾರಿ ಪ್ರೌಢಶಾಲೆ,ಹೋಳೂರು ಕೋಲಾರ ತಾಲ್ಲೂಕು ಈ ಶಾಲೆಯು 1964 ರಂದು ಪ್ರಾರಂಭವಾಗಿ ಇಲ್ಲಿಯವರೆಗೂ ಸಾವಿರಾರು ವಿದ್ಯಾರ್ಥಿಗಳ ಜೀವನಕ್ಕೆ ನಾಂದಿ ಹಾಡಿದ ಐತಿಹಾಸಿಕ ಶಾಲೆಯಾಗಿದೆ.
ಇಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ಹಲವಾರು ದೇಶ-ವಿದೇಶಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅಲ್ಲದೇ ಹಲವು ಉನ್ನತ ಪದವಿಗಳಲ್ಲಿ ಆಸೀನರಾಗಿ ಶಾಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ಹೋಗಿರುವ ಅನೇಕ ಶಿಕ್ಷಕರು ನಮಗೆಲ್ಲಾ ಮಾದರಿಗಳಾಗಿದ್ದಾರೆ. ಅವರ ನಿಸ್ವಾರ್ಥ, ದಕ್ಷತೆ, ಪ್ರಾಮಾಣಿಕತೆಯ ಕೆಲಸ ನಮ್ಮ ಈಗಿನ ಸಿಬ್ಬಂದಿಗಳಿಗೆ ದಾರಿದೀಪವಾಗಿದೆ.
2019-20 ನೇ ಸಾಲಿನಲ್ಲಿ ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ. ಹಲವು ಹಳೆಯ ವಿದ್ಯಾರ್ಥಿಗಳು, ಗ್ರಾಮದ ಮುಖಂಡರುಗಳು, ಸೇರಿ ಶಾಲಾ ರಿಪೇರಿ ಕಾರ್ಯ, ಉತ್ತಮ ಗುಣಮಟ್ಟದ ಪೇಂಟಿಂದ ಶಾಲೆಗೆ ಹೊಸ ಕಳೆಯನ್ನು ತಂದುಕೊಟ್ಟ ಕೀರ್ತಿಗೆ ಬಾಜನರಾದರು.ಅಲ್ಲದೇ ಹಗಲಿರುಳು ಶಾಲೆಯ ಶ್ರೇಯೋಭಿವೃದ್ದಿಗಾಗಿ ನಮ್ಮ ಜೊತೆ ಕೈ ಜೋಡಿಸುತ್ತಿದ್ದಾರೆ.ನಮ್ಮ ಶಾಲೆಯ ಸಿಬ್ಬಂದಿ ವತಿಯಿಂದ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಅದರ ಕೆಲವೊಂದು ಚಿತ್ರಗಳು ನಿಮಗಾಗಿ
ಅಷ್ಟೇ ಅಲ್ಲದೇ ದಾನಿಗಳ ಸಹಕಾರ ಪಡೆದುಕೊಂಡು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ. ಶಾಲೆಯಲ್ಲಿ ಇ-ಕಲಿಕೆ ಗೆ ಹೆಚ್ಚಿನ ಪ್ರಾಧನ್ಯತೆ ಕೊಟ್ಟು ಮಕ್ಕಳಲ್ಲಿ ತಂತ್ರಜ್ಞಾನದ ಅರಿವು ಜೊತೆಗೆ ಕಂಪ್ಯೂಟರ್ ಆಧಾರಿತ ಶಿಕ್ಷಣ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ.
ಅಷ್ಟೇ ಅಲ್ಲದೆ ನಮ್ಮ ಶಾಲೆ ಪ್ರತಿ ವರ್ಷವು ಉತ್ತಮ ಗುಣಮಟ್ಟದ ಶ್ರೇಷ್ಟ ಫಲಿತಾಂಶವನ್ನು ನೀಡುತ್ತಾ ಬರುತ್ತಿದೆ. ಇದಕ್ಕೆ ಎಲ್ಲ ಶಿಕ್ಷಕ ಮತ್ತು ಸಿಬ್ಬಂದಿವರ್ಗದವರ ಕಾರ್ಯದಕ್ಷತೆ ಎದ್ದು ಕಾಣುತ್ತದೆ.
ಕೇವಲ ಫಲಿತಾಂಶ ಅಷ್ಟೇ ಅಲ್ಲದೆ ನಮ್ಮ ಶಾಲೆಯ ವಿದ್ಯಾರ್ಥಿಗಳು ಕ್ರೀಡೆ,ಕಲೆ,ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಗಮನಾರ್ಹವಾದ ಪ್ರತಿಭೆಯನ್ನು ತೋರಿಸುತ್ತಿದ್ದಾರೆ.
ಹೀಗೆ ಅನೇಕ ಕಾರ್ಯಗಳೊಂದಿಗೆ ಉತ್ತಮ ಗುಣಮಟ್ಟದ ಕಲಿಕೆಯನ್ನು ನೀಡುವುದರ ಜೊತೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಿಕ್ಷಣ ನೀಡುತ್ತಾ ಬರುತ್ತಿದೆ.
ಶರಣಪ್ಪ ಜಮಾದಾರ್
ಪ್ರಭಾರ ಮುಖ್ಯಶಿಕ್ಷಕರು
ಸರ್ಕಾರಿ ಪ್ರೌಢಶಾಲೆ,ಹೋಳೂರು.



















No comments:
Post a Comment